English

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಶಾಲಾ ಮಕ್ಕಳಿಗಾಗಿ ವಿನೂತನವಾದ #VaccinateKarnataka ಎಂಬ ಸ್ಪರ್ಧೆಯನ್ನು ಪರಿಚಯಿಸುತ್ತಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸುತ್ತಿರುವ ಈ ಸ್ಪರ್ಧೆಯು ಈ ಕೆಳಕಂಡ ಷರತ್ತುಗಳನ್ನು ಒಳಗೊಂಡಿರುತ್ತದೆ. ಸ್ಪರ್ಧೆಯು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ #VaccinateKarnataka ಹೆಸರಿನಲ್ಲಿ ನಡೆಯಲಿದೆ. ಸ್ಪರ್ಧೆಯ ವೆಬ್‌ಸೈಟ್ ನಿಯಂತ್ರಣ ಅಧಿಕಾರಿಗಳ ಸ್ವಾಮ್ಯಕ್ಕೆ ಒಳಪಟ್ಟಿದೆ.

1. ಯಾರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು?
ಈ ಸ್ಪರ್ಧೆಯು ಕರ್ನಾಟಕದ 31 ಜಿಲ್ಲೆಗಳಲ್ಲಿ 1ರಿಂದ 12 ತರಗತಿಯವರೆಗೆ ಓದುತ್ತಿರುವ, ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ಪಡೆಯುವ ಕುರಿತು ಅರಿವು ಮೂಡಿಸುವಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗಾಗಿದೆ.
2. #VaccinateKarnataka ಸ್ಪರ್ಧೆಯ ಆಶಯವೇನು?
ಲಾಕ್‌ಡೌನ್ ಇರಲಿ-ಇಲ್ಲದಿರಲಿ, ಶಾಲೆ ಇರಲಿ-ಇಲ್ಲದಿರಲಿ, ಎರಡನೇ ಅಲೆ ಅಥವಾ ಮೂರನೇ ಅಲೆ, ಒಟ್ಟಿನಲ್ಲಿ ವೈರಸ್‌ನಿಂದ ಪಾರಾಗಲು ಲಸಿಕೆ ಪಡೆಯುವುದು ಅತಿಮುಖ್ಯ.
ಈ ಪಿಡುಗನ್ನು ಸೋಲಿಸಲು ಜನರು ಆದಷ್ಟು ಬೇಗ ಲಸಿಕೆಯನ್ನು ಪಡೆಯಬೇಕು. ಎಲ್ಲರೂ ಕೂಡ ಸಂಪೂರ್ಣವಾಗಿ ಲಸಿಕೆ ಪಡೆದಿಲ್ಲ; ಕೆಲವೇ ಜನರು ಲಸಿಕೆಯ ಎರಡೂ ‌ಡೋಸ್ ಪಡೆದಿದ್ದಾರೆ. ಕರ್ನಾಟಕದ ಮಕ್ಕಳಲ್ಲಿ ಪ್ರಬಲವಾದ ಇಚ್ಛಾಶಕ್ತಿಯಿದ್ದು, ಸೋಂಕನ್ನು ತಡೆಗಟ್ಟಲು ನಿಗದಿತ ಸಮಯದಲ್ಲಿ ಲಸಿಕೆ ಪಡೆಯುವ ಕುರಿತು ಅರಿವು ಮೂಡಿಸಲು ಸಶಕ್ತರಾಗಿದ್ದಾರೆ.
3. ಮಾರಣಾಂತಿಕ ವೈರಸ್ ವಿರುದ್ಧ ಹೋರಾಡಲು ನಾನೇನು ಕೊಡುಗೆ ನೀಡಬಹುದು?
ಲಸಿಕೆ ಪಡೆಯುವುದರ ಮಹತ್ವ ಮತ್ತು ಹಿರಿಯರಿಗೆ ಲಸಿಕೆ ಪಡೆಯಲು ಉತ್ತೇಜಿಸುವ 1-2 ನಿಮಿಷದ ವಿಡಿಯೋವನ್ನು ವಿದ್ಯಾರ್ಥಿಗಳು ಮಾಡಬೇಕು.
ಈ ಮೂಲಕ ಹಿರಿಯರಿಗೆ ಲಸಿಕೆ ಪಡೆಯುವುದರಿಂದ ತಾವು ಸುರಕ್ಷಿತವಾಗಿರುವ ಜೊತೆಗೆ ಇತರರನ್ನೂ ಸುರಕ್ಷಿತವಾಗಿರಿಸುವುದು ಹೇಗೆ ಎಂದು ತಿಳಿಸಬಹುದು.
4. ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
  • 1-2 ನಿಮಿಷದ ವಿಡಿಯೋದಲ್ಲಿ ಲಸಿಕೆ ಪಡೆದುಕೊಳ್ಳುವುದರ ಮಹತ್ವ ಮತ್ತು ನಿಮ್ಮ ಆತ್ಮೀಯರಿಗೆ ಲಸಿಕೆ ಪಡೆದುಕೊಳ್ಳುವಂತೆ ಯಾವ ರೀತಿ ನೀವು ಮನವೊಲಿಸುತ್ತೀರಿ ಎಂಬುದನ್ನು ವಿವರಿಸಬೇಕು. ನಿಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಭಾಷಣ, ಕವಿತೆ, ನೃತ್ಯ, ನಾಟಕ, ಚಿತ್ರಕಲೆ, ಕ್ಯಾಮೆರಾ ಶೂಟ್ ಮೊದಲಾದ ವಿಧಾನಗಳ ಮೂಲಕ ವಿಡಿಯೋ ಮಾಡಬಹುದು. ನಿಮ್ಮ ಕ್ರಿಯಾಶೀಲತೆಯನ್ನು ಬಳಸಿ ವಿಡಿಯೋ ಮಾಡಿ.
  • ಸೃಜನಶೀಲವಾಗಿ ವಿಡಿಯೋ ಮಾಡಿ. ಹಾಡು, ಸಂಗೀತ ಮೊದಲಾದ ಅಂಶಗಳನ್ನು‌ ಸೇರಿಸಿ ಹಿರಿಯರಿಗೆ ನಿಮ್ಮ ಸಂದೇಶ ರವಾನಿಸಿ.
  • ವಿಡಿಯೋ ಮಾಡಿದ ನಂತರ ಅದನ್ನು ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿ. #VaccinateKarnataka ಹ್ಯಾಶ್‌ಟ್ಯಾಗ್ ಬಳಸಲು ಮರೆಯದಿರಿ, ಇಲ್ಲವಾದಲ್ಲಿ ನಿಮ್ಮ ವಿಡಿಯೋ ಸ್ಪರ್ಧೆಗೆ ಅರ್ಹವಾಗುವುದಿಲ್ಲ.
    • ನಿಮ್ಮ ಸೋಶಿಯಲ್‌ ಮೀಡಿಯಾ ಖಾತೆ ಪಬ್ಲಿಕ್ ಆಗಿರಲಿ. ಇದರಿಂದ ನಾವು ನಿಮ್ಮ ವಿಡಿಯೋವನ್ನು ವೀಕ್ಷಿಸಿ ಸ್ಪರ್ಧೆಗೆ ಪರಿಗಣಿಸಲು ಸಾಧ್ಯವಾಗುತ್ತದೆ.
  • ನಿಮ್ಮ ವಿಡಿಯೋಗಳನ್ನು VaccinateKarnataka.in ವೆಬ್‌ಸೈಟ್‌ಗೆ ಕಳುಹಿಸಬಹುದು.
  • ನಿಮ್ಮ ಹೆಸರು, ತರಗತಿ ಮತ್ತು ಸೆಕ್ಷನ್, ಶಾಲೆ ಹಾಗೂ ಜಿಲ್ಲೆಯನ್ನು ವಿಡಿಯೋ ಪ್ರಾರಂಭದಲ್ಲಿ ತಿಳಿಸಿ.
5. ಮೌಲ್ಯಮಾಪನದ ಮಾನದಂಡಗಳೇನು?
  • ಸೃಜನಶೀಲತೆ, ಸ್ವಂತಿಕೆ, ಸಂಯೋಜನೆ, ಸರಳತೆ, ನಿರೂಪಣೆ ಮತ್ತು ಪರಿಣಾಮಕಾರಿತ್ವದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
  • 100 ಉತ್ತಮ ಎಂಟ್ರಿಗಳನ್ನು ಆಯ್ಕೆ ಮಾಡಿ #VaccinateKarnataka ಸ್ಪರ್ಧೆಯ ವಿಜೇತರು ಎಂದು ಘೋಷಿಸಲಾಗುತ್ತದೆ. ಈ 100 ವಿಜೇತರು ಹೊಚ್ಚಹೊಸ ಟ್ಯಾಬ್ಲೆಟ್‌ಗಳನ್ನು ಪಡೆಯುತ್ತಾರೆ.
  • ಕೆಪಿಸಿಸಿ ಮುಖ್ಯಸ್ಥರ ತೀರ್ಮಾನವೇ ಅಂತಿಮ. ಯಾವುದೇ ಸ್ಪರ್ಧಾಳುಗಳಿಗೆ ಸ್ಪಷ್ಟೀಕರಣ ನೀಡಲಾಗುವುದಿಲ್ಲ

ಎಚ್ಚರಿಕೆ: ನಿಮ್ಮ ವಿಡಿಯೋದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ಆಕ್ಷೇಪಾರ್ಹ, ಅಸಂಬದ್ಧ ಅಂಶಗಳಿರಬಾರದು.

6. ನಮ್ಮ ವಿಡಿಯೋಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?
#VaccinateKarnataka ಸ್ಪರ್ಧೆಗೆ ನಿಮ್ಮ ವಿಡಿಯೋಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 15. ಿಮ್ಮ ವಿಡಿಯೋಗಳು #VaccinateKarnataka ಸ್ಪರ್ಧೆಯ ನಿಯಮಾನುಸಾರ ಇದೆಯೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಅತ್ಯುತ್ತಮವಾದ ವಿಡಿಯೋಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ.
7. ಗೆದ್ದ ಬಹುಮಾನವನ್ನು ಪಡೆಯುವುದು ಹೇಗೆ?
ಸ್ಪರ್ಧೆಯಲ್ಲಿ ವಿಜೇತರಾದ ನಿಮಗೆ ಅಭಿನಂದನೆಗಳು!
ವಿಜೇತರು ಟ್ಯಾಬ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಬಹುಮಾನವನ್ನು ಪಡೆಯಬಹುದು. ಪರದೆಯಲ್ಲಿ ಕಾಣುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲಿಸಿ. ಬಹುಮಾನದ ಐಕಾನ್ ಮೇಲೆ ಕ್ಲಿಕ್ ಮಾಡಿ. ಸರಿಯಾದ ಮಾಹಿತಿಗಳೊಂದಿಗೆ ಫಾರ್ಮ್ ಭರ್ತಿ ಮಾಡಿ ಮತ್ತು "ಸಬ್ಮಿಟ್" ಬಟನ್ ಕ್ಲಿಕ್ ಮಾಡಿ.
ನೀವು ಭರ್ತಿ‌ ಮಾಡಿದ ಮಾಹಿತಿಗಳ‌ ಆಧಾರದ ಮೇಲೆ ನಮ್ಮ ಸಪೋರ್ಟ್ ಟೀಂ ಇಮೇಲ್, ದೂರವಾಣಿ ಅಥವಾ ಮೆಸೇಜ್ ಮೂಲಕ ನಿಮ್ಮನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆಗಳ ಮಾಹಿತಿ ನೀಡುತ್ತದೆ.