English

For All Students of Karnataka Your Chance to WIN 10 Android Tablets Daily

ಭಾಗವಹಿಸುವಿಕೆ ಫಾರ್ಮ್

ಎಲ್ಲ ಜಾಗಗಳಲ್ಲಿ ಸರಿಯಾದ ಮಾಹಿತಿಗಳನ್ನು ಸರಿಯಾದ ದೂರವಾಣಿ‌‌ ಸಂಖ್ಯೆಯೊಂದಿಗೆ ನಮೂದಿಸಿ. (ಎಲ್ಲ ಜಾಗಗಳನ್ನು ಕಡ್ಡಾಯವಾಗಿ ತುಂಬಿರಿ)

ಇಲ್ಲಿಯವರೆಗೆ ಒಟ್ಟು ಭಾಗವಹಿಸುವವರು 52783

#VaccinateKarnataka ಅಭಿಯಾನ

ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನವು ಮಕ್ಕಳಿಗಾಗಿ ಆರಂಭಿಸಲಾಗಿದ್ದು, ಹಿರಿಯರಿಗೆ ಲಸಿಕೆಯ ಮಹತ್ವವನ್ನು ಮಕ್ಕಳ ಮೂಲಕ ತಿಳಿಸುವ ಉದ್ದೇಶ ಹೊಂದಿದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಹನಿಯಿಂದಾಗಿ ವೈರಸ್ ಹರಡುತ್ತದೆ‌ ಎಂಬುದು ನಮಗೆಲ್ಲ ತಿಳಿದ ವಿಷಯ. ಲಸಿಕೆಯನ್ನು ಪಡೆಯುವುದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ವೃದ್ಧಿಸುವ ಮೂಲಕ ವೈರಾಣುವಿನ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಸೋಂಕು ಹರಡುವುದನ್ನು ತಡೆಯಲು ಲಸಿಕೆ ಪಡೆಯುವುದು ಅತ್ಯಾವಶ್ಯಕವಾಗಿದೆ. ಆದರೆ ಎಲ್ಲರೂ ಕೂಡ ಸಂಪೂರ್ಣವಾಗಿ ಲಸಿಕೆ ಪಡೆದಿಲ್ಲ. ಕೆಲವೇ ಜನರು ಮಾತ್ರ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.

ಹೀಗಿರುವಾಗ ಕರ್ನಾಟಕದ ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಹಿರಿಯರಿಗೆ ಲಸಿಕೆಯ ಮಹತ್ವವನ್ನು ತಿಳಿಸಿಕೊಡುವ ಸ್ಪರ್ಧೆಯನ್ನು ನಾವು ಏರ್ಪಡಿಸುತ್ತಿದ್ದೇವೆ.

ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮಾಡಬೇಕಾದ್ದು,

  1. ಲಸಿಕೆಯ ಮಹತ್ವ, ಲಸಿಕೆಯನ್ನು ಪಡೆಯುವುದರಿಂದಾಗುವ ಪ್ರಯೋಜನ ಮತ್ತು ನಿಮ್ಮ ಆತ್ಮೀಯರು ಲಸಿಕೆಯನ್ನು ಪಡೆದುಕೊಳ್ಳುವಂತೆ‌ ಮನವೊಲಿಸುವುದರ ಕುರಿತಂತೆ ವಿಡಿಯೋ‌ ಮಾಡಿ.
  2. ನಿಮ್ಮ ಸೋಶಿಯಲ್ ಮೀಡಿಯಾ‌ ಖಾತೆಗಳಲ್ಲಿ #VaccinateKarnataka ಹ್ಯಾಶ್‌ಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಿ. (ಸ್ಪರ್ಧೆಯ ಅವಧಿಯಲ್ಲಿ ನಿಮ್ಮ ಪೋಸ್ಟ್ ಪಬ್ಲಿಕ್ ಆಗಿರುವಂತೆ ನೋಡಿಕೊಳ್ಳಿ.)
  3. ನಂತರ ಫಾರ್ಮ್‌ ತುಂಬುವ ಮೂಲಕ ವಿಡಿಯೋ ಲಿಂಕ್ ಅನ್ನು ವೆಬ್‌ಸೈಟ್‌ನಲ್ಲಿ ಶೇರ್ ಮಾಡಿ.

ಈ ಮೂಲಕ ನೀವು ಆ್ಯಂಡ್ರೋಯಿಡ್ ಟ್ಯಾಬ್ಲೆಟ್‌ಗಳನ್ನು ಗೆಲ್ಲುವ ಅವಕಾಶ ಪಡೆಯಬಹುದು.

ಭಾಗವಹಿಸುವುದು ಹೇಗೆ?

4 ಸುಲಭ ಹಂತಗಳನ್ನು ಅನುಸರಿಸಿ ಸ್ಪರ್ಧೆಯಲ್ಲಿ ನೀವು ಭಾಗವಹಿಸಬಹುದು.

ಅಪ್‌ಲೋಡ್
1

ಅಪ್‌ಲೋಡ್

ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ 1-2 ನಿಮಿಷದ ವಿಡಿಯೋವನ್ನು #VaccinateKarnataka ಹ್ಯಾಶ್‌ಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಿ.

ಫಾರ್ಮ್
2

ಫಾರ್ಮ್

ವೆಬ್‌ಸೈಟ್‌ನಲ್ಲಿರುವ ಫಾರ್ಮ್ ಭರ್ತಿ ಮಾಡಿ ಮತ್ತು ನಿಮ್ಮ ವಿಡಿಯೋ ಲಿಂಕ್ ನಮೂದಿಸಿ.

ನೋಂದಣಿ
3

ನೋಂದಣಿ

"ಸಬ್ಮಿಟ್" ಬಟನ್ ಕ್ಲಿಕ್ ಮಾಡಿ ಯಾವುದೇ ಶುಲ್ಕವಿಲ್ಲದೇ ನೋಂದಾಯಿಸಿ.

ಗೆಲ್ಲಿ
4

ಗೆಲ್ಲಿ

ಪ್ರತಿದಿನ 10 ಆ್ಯಂಡ್ರೋಯಿಡ್ ಟ್ಯಾಬ್ಲೆಟ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

ನಿಯಮಗಳು:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಶಾಲಾ ಮಕ್ಕಳಿಗಾಗಿ ವಿನೂತನವಾದ #VaccinateKarnataka ಎಂಬ ಸ್ಪರ್ಧೆಯನ್ನು ಪರಿಚಯಿಸುತ್ತಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸುತ್ತಿರುವ ಈ ಸ್ಪರ್ಧೆಯು ಈ ಕೆಳಕಂಡ ಷರತ್ತುಗಳನ್ನು ಒಳಗೊಂಡಿರುತ್ತದೆ. ಸ್ಪರ್ಧೆಯು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ #VaccinateKarnataka ಹೆಸರಿನಲ್ಲಿ ನಡೆಯಲಿದೆ. ಸ್ಪರ್ಧೆಯ ವೆಬ್‌ಸೈಟ್ ನಿಯಂತ್ರಣ ಅಧಿಕಾರಿಗಳ ಸ್ವಾಮ್ಯಕ್ಕೆ ಒಳಪಟ್ಟಿದೆ.

ಈ ಸ್ಪರ್ಧೆಯು ಕರ್ನಾಟಕದ 31 ಜಿಲ್ಲೆಗಳಲ್ಲಿ 1ರಿಂದ 12 ತರಗತಿಯವರೆಗೆ ಓದುತ್ತಿರುವ, ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ಪಡೆಯುವ ಕುರಿತು ಅರಿವು ಮೂಡಿಸುವಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗಾಗಿದೆ.
ಲಾಕ್‌ಡೌನ್ ಇರಲಿ-ಇಲ್ಲದಿರಲಿ, ಶಾಲೆ ಇರಲಿ-ಇಲ್ಲದಿರಲಿ, ಎರಡನೇ ಅಲೆ ಅಥವಾ ಮೂರನೇ ಅಲೆ, ಒಟ್ಟಿನಲ್ಲಿ ವೈರಸ್‌ನಿಂದ ಪಾರಾಗಲು ಲಸಿಕೆ ಪಡೆಯುವುದು ಅತಿಮುಖ್ಯ.
ಈ ಪಿಡುಗನ್ನು ಸೋಲಿಸಲು ಜನರು ಆದಷ್ಟು ಬೇಗ ಲಸಿಕೆಯನ್ನು ಪಡೆಯಬೇಕು. ಎಲ್ಲರೂ ಕೂಡ ಸಂಪೂರ್ಣವಾಗಿ ಲಸಿಕೆ ಪಡೆದಿಲ್ಲ; ಕೆಲವೇ ಜನರು ಲಸಿಕೆಯ ಎರಡೂ ‌ಡೋಸ್ ಪಡೆದಿದ್ದಾರೆ. ಕರ್ನಾಟಕದ ಮಕ್ಕಳಲ್ಲಿ ಪ್ರಬಲವಾದ ಇಚ್ಛಾಶಕ್ತಿಯಿದ್ದು, ಸೋಂಕನ್ನು ತಡೆಗಟ್ಟಲು ನಿಗದಿತ ಸಮಯದಲ್ಲಿ ಲಸಿಕೆ ಪಡೆಯುವ ಕುರಿತು ಅರಿವು ಮೂಡಿಸಲು ಸಶಕ್ತರಾಗಿದ್ದಾರೆ.
ಲಸಿಕೆ ಪಡೆಯುವುದರ ಮಹತ್ವ ಮತ್ತು ಹಿರಿಯರಿಗೆ ಲಸಿಕೆ ಪಡೆಯಲು ಉತ್ತೇಜಿಸುವ 1-2 ನಿಮಿಷದ ವಿಡಿಯೋವನ್ನು ವಿದ್ಯಾರ್ಥಿಗಳು ಮಾಡಬೇಕು.
ಈ ಮೂಲಕ ಹಿರಿಯರಿಗೆ ಲಸಿಕೆ ಪಡೆಯುವುದರಿಂದ ತಾವು ಸುರಕ್ಷಿತವಾಗಿರುವ ಜೊತೆಗೆ ಇತರರನ್ನೂ ಸುರಕ್ಷಿತವಾಗಿರಿಸುವುದು ಹೇಗೆ ಎಂದು ತಿಳಿಸಬಹುದು.
  • 1-2 ನಿಮಿಷದ ವಿಡಿಯೋದಲ್ಲಿ ಲಸಿಕೆ ಪಡೆದುಕೊಳ್ಳುವುದರ ಮಹತ್ವ ಮತ್ತು ನಿಮ್ಮ ಆತ್ಮೀಯರಿಗೆ ಲಸಿಕೆ ಪಡೆದುಕೊಳ್ಳುವಂತೆ ಯಾವ ರೀತಿ ನೀವು ಮನವೊಲಿಸುತ್ತೀರಿ ಎಂಬುದನ್ನು ವಿವರಿಸಬೇಕು. ನಿಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಭಾಷಣ, ಕವಿತೆ, ನೃತ್ಯ, ನಾಟಕ, ಚಿತ್ರಕಲೆ, ಕ್ಯಾಮೆರಾ ಶೂಟ್ ಮೊದಲಾದ ವಿಧಾನಗಳ ಮೂಲಕ ವಿಡಿಯೋ ಮಾಡಬಹುದು. ನಿಮ್ಮ ಕ್ರಿಯಾಶೀಲತೆಯನ್ನು ಬಳಸಿ ವಿಡಿಯೋ ಮಾಡಿ.
  • ಸೃಜನಶೀಲವಾಗಿ ವಿಡಿಯೋ ಮಾಡಿ. ಹಾಡು, ಸಂಗೀತ ಮೊದಲಾದ ಅಂಶಗಳನ್ನು‌ ಸೇರಿಸಿ ಹಿರಿಯರಿಗೆ ನಿಮ್ಮ ಸಂದೇಶ ರವಾನಿಸಿ.
  • ವಿಡಿಯೋ ಮಾಡಿದ ನಂತರ ಅದನ್ನು ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿ. #VaccinateKarnataka ಹ್ಯಾಶ್‌ಟ್ಯಾಗ್ ಬಳಸಲು ಮರೆಯದಿರಿ, ಇಲ್ಲವಾದಲ್ಲಿ ನಿಮ್ಮ ವಿಡಿಯೋ ಸ್ಪರ್ಧೆಗೆ ಅರ್ಹವಾಗುವುದಿಲ್ಲ.
    • ನಿಮ್ಮ ಸೋಶಿಯಲ್‌ ಮೀಡಿಯಾ ಖಾತೆ ಪಬ್ಲಿಕ್ ಆಗಿರಲಿ. ಇದರಿಂದ ನಾವು ನಿಮ್ಮ ವಿಡಿಯೋವನ್ನು ವೀಕ್ಷಿಸಿ ಸ್ಪರ್ಧೆಗೆ ಪರಿಗಣಿಸಲು ಸಾಧ್ಯವಾಗುತ್ತದೆ.
  • ನಿಮ್ಮ ವಿಡಿಯೋಗಳನ್ನು VaccinateKarnataka.in ವೆಬ್‌ಸೈಟ್‌ಗೆ ಕಳುಹಿಸಬಹುದು.
  • ನಿಮ್ಮ ಹೆಸರು, ತರಗತಿ ಮತ್ತು ಸೆಕ್ಷನ್, ಶಾಲೆ ಹಾಗೂ ಜಿಲ್ಲೆಯನ್ನು ವಿಡಿಯೋ ಪ್ರಾರಂಭದಲ್ಲಿ ತಿಳಿಸಿ.
  • ಸೃಜನಶೀಲತೆ, ಸ್ವಂತಿಕೆ, ಸಂಯೋಜನೆ, ಸರಳತೆ, ನಿರೂಪಣೆ ಮತ್ತು ಪರಿಣಾಮಕಾರಿತ್ವದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
  • 100 ಉತ್ತಮ ಎಂಟ್ರಿಗಳನ್ನು ಆಯ್ಕೆ ಮಾಡಿ #VaccinateKarnataka ಸ್ಪರ್ಧೆಯ ವಿಜೇತರು ಎಂದು ಘೋಷಿಸಲಾಗುತ್ತದೆ. ಈ 100 ವಿಜೇತರು ಹೊಚ್ಚಹೊಸ ಟ್ಯಾಬ್ಲೆಟ್‌ಗಳನ್ನು ಪಡೆಯುತ್ತಾರೆ.
  • ಕೆಪಿಸಿಸಿ ಮುಖ್ಯಸ್ಥರ ತೀರ್ಮಾನವೇ ಅಂತಿಮ. ಯಾವುದೇ ಸ್ಪರ್ಧಾಳುಗಳಿಗೆ ಸ್ಪಷ್ಟೀಕರಣ ನೀಡಲಾಗುವುದಿಲ್ಲ

ಎಚ್ಚರಿಕೆ: ನಿಮ್ಮ ವಿಡಿಯೋದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ಆಕ್ಷೇಪಾರ್ಹ, ಅಸಂಬದ್ಧ ಅಂಶಗಳಿರಬಾರದು.

#VaccinateKarnataka ಸ್ಪರ್ಧೆಗೆ ನಿಮ್ಮ ವಿಡಿಯೋಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 15. ಿಮ್ಮ ವಿಡಿಯೋಗಳು #VaccinateKarnataka ಸ್ಪರ್ಧೆಯ ನಿಯಮಾನುಸಾರ ಇದೆಯೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಅತ್ಯುತ್ತಮವಾದ ವಿಡಿಯೋಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ.
ಸ್ಪರ್ಧೆಯಲ್ಲಿ ವಿಜೇತರಾದ ನಿಮಗೆ ಅಭಿನಂದನೆಗಳು!
ವಿಜೇತರು ಟ್ಯಾಬ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಬಹುಮಾನವನ್ನು ಪಡೆಯಬಹುದು. ಪರದೆಯಲ್ಲಿ ಕಾಣುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲಿಸಿ. ಬಹುಮಾನದ ಐಕಾನ್ ಮೇಲೆ ಕ್ಲಿಕ್ ಮಾಡಿ. ಸರಿಯಾದ ಮಾಹಿತಿಗಳೊಂದಿಗೆ ಫಾರ್ಮ್ ಭರ್ತಿ ಮಾಡಿ ಮತ್ತು "ಸಬ್ಮಿಟ್" ಬಟನ್ ಕ್ಲಿಕ್ ಮಾಡಿ.
ನೀವು ಭರ್ತಿ‌ ಮಾಡಿದ ಮಾಹಿತಿಗಳ‌ ಆಧಾರದ ಮೇಲೆ ನಮ್ಮ ಸಪೋರ್ಟ್ ಟೀಂ ಇಮೇಲ್, ದೂರವಾಣಿ ಅಥವಾ ಮೆಸೇಜ್ ಮೂಲಕ ನಿಮ್ಮನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆಗಳ ಮಾಹಿತಿ ನೀಡುತ್ತದೆ.

ಕೆಲವು‌ ಆಸಕ್ತಿದಾಯಕ ವಿಡಿಯೋಗಳು ನಿಮಗಾಗಿ.

ನೀವು ನೋಡಲೇಬೇಕಾದ #VaccinateKarnataka ಸ್ಪರ್ಧಾಳುಗಳ ಕೆಲವು ಆಸಕ್ತಿದಾಯಕ ವಿಡಿಯೋಗಳು ಇಲ್ಲಿವೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರಿ!

loading...